VIDEO ಕಾರ್ ಬಾನೆಟ್‌ನೊಳಗೆ 7 ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆ!

newsics.com ಉತ್ತರ ಪ್ರದೇಶ: ಗ್ಯಾರೇಜ್‌ನಲ್ಲಿದ್ದ ಕಾರಿನ ಬಾನೆಟ್‌ನೊಳಗೆ ಬೃಹತ್ ಹೆಬ್ಬಾವುವೊಂದು ಪತ್ತೆಯಾಗಿದೆ. ಪ್ರಯಾಗ್‌ರಾಜ್‌ನಲ್ಲಿ ಈ ಘಟನೆ ನಡೆದಿದೆ. ರಿಪೇರಿಗಾಗಿ ಗ್ಯಾರೇಜ್‌ನೊಳಗೆ ನಿಲ್ಲಿಸಿದ್ದ ಕಾರಿನ ಬಾನೆಟ್ ತೆರೆದಾಗ ಬೃಹತ್ ಹೆಬ್ಬಾವು ಕಂಡು ಮೆಕ್ಯಾನಿಕ್‌ ಬೆಚ್ಚಿಬಿದ್ದಿದ್ದಾನೆ. ಬಳಿಕ ಅರಣ್ಯ ಇಲಾಖೆಗೆ ಕರೆಮಾಡಿದ್ದು, ಅರಣ್ಯ ಅಧಿಕಾರಿಗಳು ಬಂದು ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಗ್‌ರಾಜ್‌ನ ಸಿವಿಲ್ ಲೈನ್ಸ್‌ನಲ್ಲಿರುವ ಹೋಟೆಲ್ ಅಜಯ್ ಇಂಟರ್‌ನ್ಯಾಶನಲ್ ಹೊರಗಿರುವ ಗ್ಯಾರೇಜ್‌ನಲ್ಲಿ ಈ ಘಟನೆ ನಡೆದಿದೆ. https://twitter.com/bstvlive/status/1834913956517101753