newsics.com
ಸ್ಯಾಂಡಲ್‌ವುಡ್‌ನ ರಕ್ಷಿತ್ ಶೆಟ್ಟಿ ಆ್ಯಕ್ಟಿಂಗ್ ಸ್ಕಿಲ್ ಬೇರೆ ಇದೆ. ರಕ್ಷಿತ್ ಶೆಟ್ಟಿ ಸಿನಿಮಾ ಜೀವನದಲ್ಲಿ ದೊಡ್ಡ ಸಿನಿಮಾಗಳು ಬಂದಿವೆ. ಹೊಸ ರೀತಿಯ ಚಿತ್ರಗಳು ಸಾಲು ಸಾಲಾಗಿಯೇ ರೆಡಿ ಆಗುತ್ತಿವೆ. ನಿರ್ಮಾಣದಲ್ಲಿ ಒಳ್ಳೆ ಕಥೆಗೆ ರಕ್ಷಿತ್ ದುಡ್ಡು ಕೂಡ ಹಾಕಿದ್ದಾರೆ. ಅದರ ಮಧ್ಯೆ ಕೃತಿ ಶೆಟ್ಟಿ ನನಗೆ ರಕ್ಷಿತ್ ಶೆಟ್ಟಿ ಆ್ಯಕ್ಟಿಂಗ್ ಇಷ್ಟ ಅಂತ ಹೇಳಿರೋದು ಹೆಚ್ಚು ವೈರಲ್ ಆಗುತ್ತಿದೆ.
ಕೃತಿ ಶೆಟ್ಟಿ ಕನ್ನಡದಲ್ಲಿ ಸಿನಿಮಾ ಮಾಡಿಲ್ಲ. ಆದರೆ, ಕನ್ನಡದ ಕಲಾವಿದರ ಅಭಿನಯವನ್ನ ಗಮನಿಸುತ್ತಲೇ ಇರ್ತಾರೆ. ರಕ್ಷಿತ್ ಶೆಟ್ಟಿ ಈ ವಿಚಾರದಲ್ಲಿ ಫಸ್ಟ್ ಪ್ಲೇಸ್ ಅಲ್ಲಿಯೇ ಇದ್ದಾರೆ ಅನಿಸುತ್ತದೆ. ಕೃತಿ ಶೆಟ್ಟಿ ಈಗಾಗಲೇ ಈ ವಿಚಾರವನ್ನು ಕೂಡ ಹೇಳಿಕೊಂಡಿದ್ದಾರೆ. ಅದ್ಯಾವಾಗ ಹೇಳಿಕೋಂಡಿದ್ದಾರೆ. ಎಲ್ಲಿ ಹೇಳಿಕೊಂಡಿದ್ದಾರೆ. ಈ ಮಾಹಿತಿ ಇಲ್ಲ. ಆದರೆ, ಮಾತು ವೈರಲ್ ಆಗಿದೆ.
ರಕ್ಷಿತ್ ಶೆಟ್ಟಿ ಅಭಿನಯ ತುಂಬಾನೆ ಚೆನ್ನಾಗಿರುತ್ತದೆ. ಅದನ್ನ ಗಮನಿಸುತ್ತಲೇ ಇರುತ್ತೇನೆ. ರಕ್ಷಿತ್ ಶೆಟ್ರ ಅಭಿನಯ ನನಗೆ ತುಂಬಾನೇ ಇಷ್ಟ ಅಂತಲೂ ಕೃತಿ ಶೆಟ್ಟಿ ಹೇಳಿಕೊಂಡಿದ್ದಾರೆ. ಈ ಒಂದು ಮಾತು ಎಲ್ಲೆಡೆ ವೈರಲ್ ಆಗಿದೆ. ಒಂದು ಕಡೆಗೆ ರಕ್ಷಿತ್ ಶೆಟ್ಟಿ ಫೋಟೋ ಮತ್ತೊಂದು ಕಡೆಗೆ ಕೃತಿ ಶೆಟ್ಟಿ ಫೋಟೋಗಳು ಈಗ ಗಮನ ಸೆಳೆಯುತ್ತಿವೆ. ರಕ್ಷಿತ್ ಶೆಟ್ಟಿ ಮತ್ತು ಕೃತಿ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ? ಈ ರೀತಿಯ ಸುದ್ದಿ ಏನೂ ಇಲ್ಲ. ಆದರೆ, ಕೃತಿ ಶೆಟ್ಟಿ ಅಂತು ರಕ್ಷಿತ್ ಶೆಟ್ರ ಸ್ಟೈಲ್ ಆಫ್ ವರ್ಕಿಂಗ್ ಮೆಚ್ಚಿಕೊಂಡು ಕೊಂಡಾಡಿದ್ದಾರೆ. ಇನ್ನುಳಿದಂತೆ ಶೆಟ್ರ ಮೇಲೆ ಕೃತಿ ಶೆಟ್ಟಿಗೆ ಕ್ರಶ್ ಆಯಿತೇ ಅನ್ನುವ ಪ್ರಶ್ನೆ ಕೂಡ ಹೆಚ್ಚು ಕುತೂಹಲ ಮೂಡಿಸುತ್ತಿದೆ.