newsics.com
ಬೆಂಗಳೂರು: ಬಹಳ ದಿನಗಳಿಂದ ಬಾಕಿ ಉಳಿದಿದ್ದ ಬಿಜೆಪಿ ಮತ್ತು ಆರ್ ಎಸ್ ಎಸ್ ಸಮನ್ವಯ ಸಭೆ ಇಂದು ಬೆಂಗಳೂರಿನಲ್ಲಿ ನಡೆದಿದೆ.
ರಾಜ್ಯ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದ ಶಾಸಕರು ಸಭೆಯ ಬಳಿಕ ತಣ್ಣಗಿರುವಂತೆ ಕಾಣಿಸಿಕೊಂಡಿದ್ದು, ಸಮನ್ವಯತೆ ಮತ್ತು ಪಕ್ಷ ಸಂಘಟನೆ ಕುರಿತಂತೆ ಸಭೆಯಲ್ಲಿ ಒಂದಷ್ಟು ಪಾಠ ಹೇಳಲಾಗಿದೆ.
ಕೆಲವು ಸಮಯದಿಂದ ಇದ್ದಂತಹ ಮುನಿಸು, ಸಮನ್ವಯದ ಕೊರತೆ ಎಲ್ಲವೂ ಇಂದು ಒಂದಷ್ಟು ಪರಿಹಾರವಾಗಿದೆ. ರಾಜ್ಯ ನಾಯಕತ್ವದ ವಿರುದ್ಧ ಮುನಿದಿದ್ದವರನ್ನು ಕರೆದು ಮಾತುಕತೆ ಮಾಡಲಾಗಿದ್ದು, ದೊಡ್ಡ ಮಟ್ಟದಲ್ಲಿ ಕುದಿಯುತ್ತಿದ್ದ ಅಸಮಾಧಾನವನ್ನು ತಕ್ಕಮಟ್ಟಿಗೆ ಶಮನ ಮಾಡಲು ಇಂದಿನ ಸಭೆ ಯಶಸ್ವಿಯಾಗಿದೆ. ಇದ್ದ ಅಸಮಾಧಾನವನ್ನು ಮರೆತು ಎಲ್ಲರೂ ಒಂದಾಗಿ ಹೋಗಬೇಕು ಎಂದು ಬಿಜೆಪಿ ರಾಜ್ಯ ನಾಯಕತ್ವ ಮತ್ತು ನಾಯಕತ್ವದ ವಿರುದ್ಧ ಸಿಟ್ಟಾಗಿದ್ದವರು ಎರಡೂ ಕಡೆಯವರಿಗೂ ಬೆಂಗಳೂರಿನಲ್ಲಿ ಇಂದು ನಡೆದ ಸಭೆಯಲ್ಲಿ ಸೂಚನೆ ಸಿಕ್ಕಿದೆ.