newsics.com
ನವದೆಹಲಿ: ಚೀನಾದಲ್ಲಿ ಅತಿಹೆಚ್ಚು ನೆಲೆ ನಿಂತಿರುವ ಜಾಗತಿಕ ಉತ್ಪಾದನಾ ವಲಯದಲ್ಲಿ ಹಲವು ಕಂಪನಿಗಳು ಬೇರೆ ಕಡೆಯೂ ಹರಡಿಕೊಳ್ಳುತ್ತಿವೆ. ಇದರ ಫಲವಾಗಿ ಭಾರತದಲ್ಲೂ ಎಲೆಕ್ಟ್ರಾನಿಕ್ಸ್ ಇತ್ಯಾದಿ ಉತ್ಪಾದನೆ ಹೆಚ್ಚಾಗತೊಡಗಿದೆ. ಈ ಮಧ್ಯೆ ಬಾಂಗ್ಲಾದೇಶದಲ್ಲಿ ಇರುವ ಬಿಕ್ಕಟ್ಟೂ ಕೂಡ ಭಾರತಕ್ಕೆ ತುಸು ಲಾಭ ತಂದಿದೆ.
ಬಾಂಗ್ಲಾದೇಶ ಜವಳಿ, ಉಡುಪು ಉತ್ಪಾದನೆಯಲ್ಲಿ ಬಲವಾಗಿದೆ. ಹಲವು ಐರೋಪ್ಯ ದೇಶಗಳಿಂದ ಸಾಕಷ್ಟು ಆರ್ಡರ್ಸ್ ಬರುತ್ತದೆ. ಈ ಕ್ಷೇತ್ರದಲ್ಲಿ ಭಾರತಕ್ಕಿಂತ ಬಾಂಗ್ಲಾದ ಒಂದು ಕೈ ಮೇಲಿದೆ. ಈಗ ಆ ದೇಶದಲ್ಲಿ ರಾಜಕೀಯ ಮತ್ತು ನಾಗರಿಕ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಹಲವು ದೇಶಗಳ ಉಡುಪು ಕಂಪನಿಗಳು ಭಾರತೀಯ ಕಂಪನಿಗಳತ್ತ ಮುಖ ಮಾಡುತ್ತಿವೆ.
ನೋಯ್ಡಾದ ಜವಳಿ ಕ್ಲಸ್ಟರ್ನ ಹಲವು ಸಂಸ್ಥೆಗಳು, ತಮಿಳುನಾಡಿನ ತಿರುಪ್ಪೂರ್ ಉದ್ಯಮಗಳಿಗೆ ವಿದೇಶಗಳಿಂದ ಆರ್ಡರ್ಸ್ ಬರುವ ಪ್ರಮಾಣ ಹೆಚ್ಚಾಗಿದೆ. ಕಳೆದ ಎರಡು ವಾರಗಳಿಂದ ತಿರುಪ್ಪೂರ್ನ ಜವಳಿ ಉದ್ಯಮಕ್ಕೆ ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಪೋಲ್ಯಾಂಡ್ ದೇಶಗಳ ಸುಪ್ರಸಿದ್ಧ ಉಡುಪು ಬ್ರ್ಯಾಂಡ್ಗಳು 450 ಕೋಟಿ ರೂ ಮೊತ್ತದ ಬಟ್ಟೆಗಳಿಗೆ ಆರ್ಡರ್ಸ್ ಕೊಟ್ಟಿರುವುದು ತಿಳಿದುಬಂದಿದೆ.