Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭ ದಿನ… 04-09-2024 ಬುಧವಾರ, ಅಹಂಕಾರವನ್ನು ಬೆಳೆಯಗೊಡದಿರುವುದು ಉತ್ತಮ…
ಈ ದಿನಪಂಚಾಂಗ

ಶುಭ ದಿನ… 04-09-2024 ಬುಧವಾರ, ಅಹಂಕಾರವನ್ನು ಬೆಳೆಯಗೊಡದಿರುವುದು ಉತ್ತಮ…

Share
2 Min Read
SHARE

newsics.com

ನ್ಯೂಸಿಕ್ಸ್‌.ಕಾಮ್

ಶುಭ ದಿನ

04-09-2024 ಬುಧವಾರ

***

ಈ ದಿನದ ಸುಭಾಷಿತ

ಉಪರ್ಯುಪರಿ ಲೋಕಸ್ಯ
ಸರ್ವೋ ಭವಿತುಮಿಚ್ಛತಿ |
ಯತತೇ ಚ ಯಥಾಶಕ್ತಿ
ನ ಚ ತದ್ವರ್ತತೇ ತಥಾ ||
(ನಾರದ ಪುರಾಣ)

ತಾವು ಲೋಕದ ನಿರ್ಬಂಧಗಳನ್ನೂ, ಮಿತಿಗಳನ್ನೂ ಮೀರಬೇಕೆಂದು ಎಲ್ಲರೂ ಮೇಲುಮೇಲೇರಲು ತವಕಿಸುತ್ತಾರೆ. ತಮ್ಮ ಶಕ್ತ್ಯನುಸಾರ ಪ್ರಯತ್ನ ಮಾಡುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ!.

ಎಲ್ಲ ಮಾನುಷ ಪ್ರಯತ್ನಗಳೂ ಸಹಜವಾದ ಗಡಿಗಳಿಗೆ ಒಳಪಟ್ಟವೇ. ಈ ಸ್ಥಿರ ಸತ್ಯದ ಅರಿವಿದ್ದರೂ ತಾವು ಸ್ವಚ್ಛಂದವಾಗಿ ಇರಬಲ್ಲೆವೆಂದು ಭ್ರಮಿಸುವುದು ಒಂದು ವಿಚಿತ್ರವಾದ ದೌರ್ಬಲ್ಯ. ಇಂಥ ಚಾಪಲ್ಯಕ್ಕೆ ಪೋಷಣೆ ದೊರೆಯುವುದು ಅಹಂಕಾರಾತಿಶಯದಿಂದ. ಅಹಂಕಾರವನ್ನು ಬೆಳೆಯಗೊಡದೆ ನಮ್ರರಾಗಿರುವುದು ಹಿತಸಾಧಕ.

***

ಈ ದಿನದ ಮಾತು

ತಪ್ಪುಗಳನ್ನು ಮಾಡುವುದು ಮತ್ತು ಕಲಿಯುವುದೇ ಅನುಭವ.

– ಬಿಲ್ ಆಕ್ಮನ್

***

ಈ ದಿನದ ಇತಿಹಾಸ

* ದಾದಾ ಭಾಯಿ ನವರೋಜಿ – ಸೆಪ್ಟೆಂಬರ್ 04, 1825 ರಂದು ಜನಿಸಿದರು. ಬ್ರಿಟಿಷ್ ಪಾರ್ಸಿ ವಿದ್ವಾಂಸ, ವ್ಯಾಪಾರಿ ಮತ್ತು ರಾಜಕಾರಣಿಯಾಗಿದ್ದು, ಅವರು 1892 ಮತ್ತು 1895 ರ ನಡುವೆ ಯುನೈಟೆಡ್ ಕಿಂಗ್‌ಡಮ್ ಹೌಸ್ ಆಫ್ ಕಾಮನ್ಸ್‌ನಲ್ಲಿ, ಲಿಬರಲ್ ಪಕ್ಷದ ಸಂಸತ್ ಸದಸ್ಯರಾಗಿದ್ದರು (ಸಂಸದ) ಮತ್ತು ಬ್ರಿಟಿಷ್ ಸಂಸದರಾದ ಮೊದಲ ಭಾರತೀಯ. ನೌರೋಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕ ಸದಸ್ಯರಲ್ಲಿ ಒಬ್ಬರು. 2014 ರಲ್ಲಿ, ಯೂಕೆ – ಭಾರತ ಸಂಬಂಧಗಳ ಸೇವೆಗಳಿಗಾಗಿ ಉಪ – ಪ್ರಧಾನಿ ನಿಕ್ ಕ್ಲೆಗ್ ದಾದಾಭಾಯ್ ನೌರೋಜಿ ಪ್ರಶಸ್ತಿಗಳನ್ನು ಉದ್ಘಾಟಿಸಿದರು. 1963, 1997 ಮತ್ತು 2017 ರಲ್ಲಿ ನೌರೋಜಿ ಹೆಸರಲ್ಲಿ ಇಂಡಿಯಾ ಪೋಸ್ಟ್ ಅಂಚೆಚೀಟಿಗಳನ್ನು ಮೀಸಲಿಟ್ಟಿದೆ. “ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ” ಮತ್ತು “ಭಾರತದ ಅನಧಿಕೃತ ರಾಯಭಾರಿ” ಎಂದೂ ಕರೆಯಲ್ಪಡುವ ಸರ್ ದಾದಾಭಾಯ್ ನೌರೋಜಿ ದೋರ್ಡಿ ಅವರು 30 ಜೂನ್ 1917 ರಂದು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು.

* ಸೆಪ್ಟೆಂಬರ್ 04, 1962 ರಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಕಿರಣ್ ಮೋರೆ ಗುಜರಾತಿನ ಬರೋಡದಲ್ಲಿ ಜನಿಸಿದರು.

* ಸೆಪ್ಟೆಂಬರ್ 04, 1972 ರಂದು ಅಮೆರಿಕದ ಈಜುಗಾರ ಮಾರ್ಕ್ ಸ್ಪಿಟ್ಜ್ ಅವರು ಮ್ಯೂನಿಕ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 400 ಮೀಟರುಗಳ ಮೆಡ್ಲೆ ರಿಲೇಯಲ್ಲಿ ಏಳನೇ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಹೆಗಲಿಗೆ ಏರಿಸಿಕೊಂಡ ಪ್ರಪ್ರಥಮ ಈಜುಗಾರ ಎಂಬ ಖ್ಯಾತಿ ಇವರದಾಯಿತು.

* ಸ್ಟೀವ್ ಇರ್ವಿನ್ – ಆಸ್ಟೇಲಿಯಾದ ಪ್ರಸಿದ್ಧ ವನ್ಯಜೀವಿ ಸಂರಕ್ಷಕ ಹಾಗು ವನ್ಯಜೀವಿ ಚಲನಚಿತ್ರಕಾರರು. ಡಿಸ್ಕವರಿ ಚಾನೆಲ್ ಹಾಗು ಅನಿಮಲ್ ಪ್ಲ್ಯಾನೆಟ್ ಗಳಲ್ಲಿ ಇವರ ಪ್ರಸಿದ್ಧ ಟೀ.ವಿ ಕಾರ್ಯಕ್ರಮ ಕ್ರೊಕೊಡೈಲ್ ಹಂಟರ್ ಪ್ರಸಾರವಾಗುತಿತ್ತು. ಇದರಿಂದಾಗಿ ಇವರು ಸ್ವತ: ಕ್ರೊಕೊಡೈಲ್ ಹಂಟರ್ ಎಂದೇ ಚಿರಪರಿಚಿತರಾಗಿದ್ದರು. ನಿರ್ಭೀತಿಯಿಂದ, ಮೊಸಳೆಗಳೊಂದಿಗೆ ಇವರು ನಡೆಸಿಕೊಡುತ್ತಿದ್ದ ಟೀವಿ ಕಾರ್ಯಕ್ರಮ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ವನ್ಯಜೀವಿಗಳು, ಅದರಲ್ಲೂ ಹಾವು ಹಾಗು ಮೊಸಳೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೆಪ್ಟೆಂಬರ್ 04, 2006 ರಂದು ಇರ್ವಿನ್ ಅವರು ಸ್ಟಿಂಗ್‌ರೇಗಳ ಬಗ್ಗೆ ಸಮುದ್ರದಾಳದಲ್ಲಿ ಹೊಸ ಡೊಕ್ಯುಮೆಂಟರಿ ತಯಾರಿಸುವಾಗ ಸ್ಟಿಂಗ್‌ರೇನ ಬಾರ್ಬಿನ ಇರಿತದಿಂದ ಸಾವಿಗೀಡಾದರು.

* ಸೆಪ್ಟೆಂಬರ್ 04, 2015 ರಂದು ಗೋವಾದ 7ನೇ ಮುಖ್ಯಮಂತ್ರಿಯಾಗಿದ್ದ ವಿಲ್ಫ್ರೆಡ್ ಡಿಸೋಜ ನಿಧನರಾದರು.

TAGGED:Better not to grow ego...Good day... 04-09-2024 Wednesday
Share This Article
Facebook Twitter Copy Link Print
Previous Article ಶುಭೋದಯ‌… ಇಂದಿನ‌ ಪಂಚಾಂಗ, 04-09-2024 ಬುಧವಾರ, ಚಂದ್ರ ದರ್ಶನ
Next Article ಪಂಜಾಬ್‌ನಲ್ಲಿ ತ್ರಿಬಲ್ ಮರ್ಡರ್; ಮದುವೆಯ ಶಾಪಿಂಗ್ ಗೆ ಹೋಗುತ್ತಿದ್ದವರ ಹತ್ಯೆ

Popular Posts

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?