newsics.com
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ ಬಂದಿರುವ ವೀಕ್ಷಕರು ಶರಣ್ಯ ಶೆಟ್ಟಿ ಅಂದಕ್ಕೆ, ನಟನೆಗೆ ಫಿದಾ ಆಗಿದ್ದಾರೆ.
ಕೃಷ್ಣಂ ಪ್ರಣಯ ಸಖಿ ನೋಡಿ ಬಂದಿರೋ ವೀಕ್ಷಕರಿಗೆ ಶರಣ್ಯ ಶೆಟ್ಟಿ ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಸಿನಿಮಾ ನೋಡಿದವರಿಗೆ ಶರಣ್ಯ ಶೆಟ್ಟಿಯ ಅಂದ, ಚೆಂದ ಗ್ಲಾಮರ್ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಜನರು ಫಿದಾ ಆಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಶರಣ್ಯ ಶೆಟ್ಟಿ, ಕನ್ನಡ ಸಿನಿಮಾ ಇಂಡಷ್ಟ್ರಿಯ ಭರವಸೆಯ ನಟಿಯಾಗಿ ಮಿಂಚಲಿದ್ದಾರೆ. ಈಗಾಗಲೇ ಇವರ ಕೈಯಲ್ಲಿ ಮೂರು ಸಿನಿಮಾಗಳಿವೆ.
ಕಿರುತೆರೆಯಿಂದ ಆರಂಭವಾದ ಇವರ ನಟನಾ ಜರ್ನಿ ಈಗ ಹಿರಿತೆರೆಯಲ್ಲಿ ಮಿಂಚುವಂತೆ ಮಾಡಿದೆ.