Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ 25-08-2024 ಭಾನುವಾರ ಕ್ರೋಧಿ ಸಂವತ್ಸರ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸ ಕೃಷ್ಣ ಪಕ್ಷ ಸಪ್ತಮಿ ಭರಣಿ ನಕ್ಷತ್ರ
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ 25-08-2024 ಭಾನುವಾರ ಕ್ರೋಧಿ ಸಂವತ್ಸರ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸ ಕೃಷ್ಣ ಪಕ್ಷ ಸಪ್ತಮಿ ಭರಣಿ ನಕ್ಷತ್ರ

Share
4 Min Read
SHARE

newsics.com

ನ್ಯೂಸಿಕ್ಸ್.ಕಾಂ

ಶುಭೋದಯ

ಈ ದಿನ – ನಿತ್ಯ ಪಂಚಾಂಗ

25-08-2024 ಭಾನುವಾರ

—

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 25/08/2024
ತಿಂಗಳು – ಆಗಸ್ಟ್
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ಸಪ್ತಮಿ 27:38:35*
ಪಕ್ಷ – ಕೃಷ್ಣ
ನಕ್ಷತ್ರ – ಭರಣಿ 16:44:03
ಯೋಗ – ಧ್ರುವ 24:27:30*
ಕರಣ – ವಿಷ್ಟಿ (ಭದ್ರ)16:30:28
ಕರಣ – ಭವ 27:38:35*

ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ಮೇಷ till 22:28:37
ಚಂದ್ರ ರಾಶಿ ವೃಷಭ from 22:28:37
ಸೂರ್ಯ ರಾಶಿ ಸಿಂಹ
ಋತು ವರ್ಷ

ಸೂರ್ಯೋದಯ 06:09:21
ಸೂರ್ಯಾಸ್ತ 18:33:38
ಹಗಲಿನ ಅವಧಿ 12:24:16
ರಾತ್ರಿಯ ಅವಧಿ 11:35:46
ಚಂದ್ರಾಸ್ತ 11:20:15
ಚಂದ್ರೋದಯ.) 23:04:22

ರಾಹು ಕಾಲ 17:01 – 18:34 ಅಶುಭ
ಯಮಗಙಡ ಕಾಲ 12:22 – 13:55 ಅಶುಭ
ಗುಳಿಕ ಕಾಲ 15:28 – 17:01
ಅಭಿಜಿತ್ 11:57 – 12:46 ಶುಭ
ದುರ್ಮುಹೂರ್ತ 16:54 – 17:44 ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30

ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

***

ಈ ದಿನದ ಮಾತು

ಕೆಡುಕರನು ನಾ ಹುಡುಕುತ ಹೊರಟೆ. ಕೆಡುಕರಾರೂ ಸಿಗಲಿಲ್ಲ. ನನ್ನಯ ಮನವನು ನಾನೇ ನೋಡೆ, ನನಗಿಂತ ಕೆಡುಕರಿಲ್ಲ.
– ಸಂತ ಕಬೀರರ ದೋಹೆ
(ಸ್ವಾಮಿ ಪುರುಷೋತ್ತಮಾನಂದ)

***

ಈ ದಿನದ ಸುಭಾಷಿತ

ನಾತಿಪ್ರಸನ್ನಹೃದಯೋ ಯದ್ಧದ್ಯಾದ್ಗುರುರಪ್ಯಸೌ /
ನ ತತ್ ಸತ್ಯಂ ಭವೇತ್ ತಸ್ಮಾತ್ ಅರ್ಚನೀಯೋ ಗುರುಃ ಸದಾ //

ಗುರು ಎಂಬ ಶಬ್ದದಲ್ಲಿಯೇ ಪರಮಾರ್ಥ ಅಡಗಿದೆ. ಅಜ್ಞಾಂಧಕಾರವನ್ನು ನೀಗಿಸಿ ಜ್ಞಾನದ ಬೆಳಕನ್ನು ತೋರುವವನು ಎಂದರ್ಥ. ಗುರುವು ಮಾಡುವ ಉಪದೇಶವು ಫಲಕಾರಿಯಾಗಬೇಕಾದರೆ ಗುರುವು ಸುಪ್ರಸನ್ನಮನಸ್ಕನಾಗಿರಬೇಕು. ಅದಕ್ಕಾಗಿ ಗುರುಗಳ ಸೇವೆಯನ್ನು ಶ್ರದ್ಧೆಯಿಂದ ಮಾಡಬೇಕು. ಗುರುಕಾರುಣ್ಯ ಬಲವತ್ತರವಾಗಿರುತ್ತದೆ.

***

ಈ ದಿನದ ಇತಿಹಾಸ

* ಆಗಸ್ಟ್ 25, 1875 ರಂದು ಹಡಗೊಂದರ ಮಾಸ್ಟರ್ ಮ್ಯಾಥ್ಯೂ ವೆಬ್ ಅವರು 21 ಗಂಟೆ 45 ನಿಮಿಷಗಳ ಅವಧಿಯ್ಲಲಿ ಬ್ರೆಸ್ಟ್ ಸ್ಟ್ರೋಕ್ ವಿಧಾನದಲ್ಲಿ ಈಜುತ್ತಾ ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿದ ಮೊತ್ತ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

* ಸುಬೋಧ ರಾಮರಾವ್ – ರಾಮರಾವ್ ಅವರು ಆಗಸ್ಟ್‌ 25, 1890 ರಂದು ಚಿಕ್ಕಮಗಳೂರಿನಲ್ಲಿ ಜನಿಸಿದರು. ಕನ್ನಡ ನವೋದಯ ಕಾಲದ ಮಹತ್ವದ ಲೇಖಕರಾಗಿ, ‘ಸುಬೋಧ’, ‘ನಗುವನಂದ’ ಮುಂತಾದ ಪ್ರಸಿದ್ಧ ಪತ್ರಿಕೆಗಳ ಸಂಸ್ಥಾಪಕರಾಗಿ, ಸುಬೋಧ ಪ್ರಕಟಣಾಲಯವನ್ನು ಸ್ಥಾಪಿಸಿ ನೂರಾರು ಪುಸ್ತಕಗಳ ಪ್ರಕಾಶಕಾರಾಗಿ ಕನ್ನಡ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ. ತಮ್ಮ ಬಾಳಿನಲ್ಲಿ ಬೆಳಕು ಕಂಡು ಕೊಂಡಿದ್ದಲ್ಲದೆ ಇತರರ ಬಾಳಿಗೂ ಬೆಳಕಾಗುವಂತೆ ಬಾಳಿದ ಸುಬೋಧ ರಾಮರಾಯರು ಬರೆದ ಮೈಸೂರಿನ ರಾಜ್ಯಲಕ್ಷ್ಮಿಯರು ಎಂಬ ಪುಸ್ತಕವನ್ನು ಮೈಸೂರು ಸಂಸ್ಥಾನದ ಲೋಯರ್ ಸೆಕೆಂಡರಿ ತರಗತಿಗೆ ಪಠ್ಯವಾಗಿ ಆಯ್ಕೆಮಾಡಲಾಗಿತ್ತು. ಕೆಂಗಲ್‌ ಹನುಮಂತಯ್ಯನವರ ಅಧ್ಯಕ್ಷತೆಯಲ್ಲಿ ‘ಜ್ಞಾನಶಿಲ್ಪಿ’ ಬಿರುದು ಗೌರವ, ಸಂಪದ್ಗಿರಿರಾಯರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕನ್ನಡ ಕೂಟದಿಂದ ಸನ್ಮಾನ ಹೀಗೆ ಹಲವಾರು ಸಂಸ್ಥೆಗಳಿಂದ ಸುಬೋಧ ರಾಮರಾವ್ ಅವರಿಗೆ ಸನ್ಮಾನ ಸಂದಿತ್ತು. ನ್ನಡ ನಾಡಿನ ಅದಮ್ಯ ಚೇತನರಾದ ಸುಬೋಧರಾಮರಾಯರು 1979ರ ಮಾರ್ಚ 14 ರಂದು ನಿಧನರಾದರು.

* ಆಗಸ್ಟ್ 25, 1918 ರಂದು ಬಿಹಾರದ ಮಾಜಿ ಮುಖ್ಯಮಂತ್ರಿ ಬಿಂದೇಶ್ವರಿ ಪ್ರಸಾದ್ ಮಂಡಲ್ ಅವರು ಜನಿಸಿದರು.

* ಹೆನ್ರಿ ಬೆಕರಲ್ – 25 ಆಗಸ್ಟ್ 1908 ರಂದು ನಿಧನರಾದರು. ಫ್ರಾನ್ಸ್‌ನ ಭೌತಶಾಸ್ತ್ರಜ್ಞ. ಮೇರಿ ಕ್ಯೂರಿ ಹಾಗೂ ಪಿಯರೆ ಕ್ಯೂರಿಯವರೊಂದಿಗೆ ವಿಕಿರಣಶಾಸ್ತ್ರದ ಬಗ್ಗೆ ಸಂಶೋಧನೆ ನಡೆಸಿ 1903 ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರರಾದವರು. ಇವರು, ರೇಡಿಯಂನಿಂದ ಉತ್ಸರ್ಜಿತವಾಗುವ ವಿಕಿರಣಗಳು ಎಲೆಕ್ಟ್ರಾನ್ ಗಳ ಪ್ರವಾಹದಿಂದ ಕೂಡಿರುತ್ತವೆ ಎಂಬುದನ್ನ ಕಂಡುಹಿಡಿದರು. ಹೀಗಾಗಿ, ಇವರು ಕಂಡುಹಿಡಿದ ಕಿರಣಗಳಿಗೆ ಬೇಕೆರಲ್ ಕಿರಣಗಳು ಎಂದು ಕರೆಯಲಾಗುತ್ತದೆ. ಇಷ್ಟೇ ಅಲ್ಲದೇ, ವಿಕಿರಣ ಪಟುತ್ವದ ಎಸ್. ಐ. ಏಕಮಾನಕ್ಕೆ ಇವರ ಹೆಸರನ್ನೇ ಇಟ್ಟು ಗೌರವಿಸಲಾಗಿದೆ. ಹೆನ್ರಿ ಬೇಕೆರಲ್, ಭೌತಶಾಸ್ತ್ರದ ಪ್ರಾಧ್ಯಾಪಕರಾಗಿಯೂ, ಇಂಜಿನಿಯರ್ ಆಗಿಯೂ ಅಪೂರ್ವ ಸೇವೆಯನ್ನ ಸಲ್ಲಿಸಿದ್ದಾರೆ.

* ಆಗಸ್ಟ್ 25, 1944 ರಂದು ನಾಲ್ಕು ವರ್ಷಗಳ ನಾಜಿ ಆಳ್ವಿಕೆಯಿಂದ ಪ್ಯಾರಿಸ್ಸನ್ನು ಮಿತ್ರ ಪಡೆಗಳು ವಿಮೋಚನೆಗೊಳಿಸಿದವು.

* ಆಗಸ್ಟ್ 25, 1948 ರಂದು ‘ಜನ ಗಣ ಮನ’ವನ್ನು ತಾತ್ಕಾಲಿಕ ರಾಷ್ಟ್ರಗೀತೆಯಾಗಿ ಅಂಗೀಕರಿಸಲು ಭಾರತದ ಸಂವಿಧಾನ ಸಭೆ ಅಂತಿಮ ನಿರ್ಣಯ ಕೈಗೊಂಡಿತು.

* ಆಗಸ್ಟ್ 25, 2012 ರಂದು ನೀಲ್ ಆರ್ಮ್‌ಸ್ಟ್ರಾಂಗ್ ಅವರು ನಿಧನರಾದರು. ಅಮೇರಿಕಾ ಸಂಯುಕ್ತ ಸಂಸ್ಥಾನದ ಅಂತರಿಕ್ಷಯಾನಿ ಮತ್ತು ವೈಮಾನಿಕ. ನೀಲ್ ಆರ್ಮ್‌ಸ್ಟ್ರಾಂಗ್ ಭೂಮಿಯ ಉಪಗ್ರಹವಾದ ಚಂದ್ರನ ಮೇಲೆ ಕಾಲಿರಿಸಿದ ಮೊದಲ ಮಾನವ . 1966ರಲ್ಲಿ ಅಂತರಿಕ್ಷ ನೌಕೆಯಾದ ಜೆಮಿನಿ 8ರ ಚಾಲಕರಾಗಿ ಹಾಗು 1969ರರಲ್ಲಿ ಚಂದ್ರಯಾನ ಮಾಡಿದ ನೌಕೆ ಅಪೊಲೊ 11ರ ಮುಖ್ಯಸ್ಥರಾಗಿ ಒಟ್ಟು ಎರಡು ಬಾರಿ ಅಂತರಿಕ್ಷಯಾನ ಮಾಡಿದರು.

TAGGED:Good Morning Today's Almanac 25-08-2024 Sunday newsics ಇಂದಿನ ಪಂಚಾಂಗ
Share This Article
Facebook Twitter Copy Link Print
Previous Article ಸಿದ್ದರಾಮಯ್ಯ ಸಂಪುಟಕ್ಕೆ  ಸರ್ಜರಿ?; ಡಿಸೆಂಬರ್ ನಲ್ಲಿ ಬದಲಾವಣೆ ಸಾಧ್ಯತೆ!
Next Article ದಿನ ಭವಿಷ್ಯ… 25-08-2024 ಭಾನುವಾರ, ಸಿಂಹ- ಆರೋಗ್ಯ ಕಾಳಜಿ ಅವಶ್ಯ, ಕುಂಭ- ಭೂ ವಿವಾದ ಇತ್ಯರ್ಥ, ಇಂದಿನ‌ ನಿಮ್ಮ ರಾಶಿ‌ ಭವಿಷ್ಯ ಹೇಗಿದೆ?

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಜ್ಯೋತಿಷ್ಯದಿನ ಭವಿಷ್ಯ

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?