ಮುದ್ದು ರಾಧೆಯಾದ ಮಿಲ್ಕಿ ಬ್ಯೂಟಿ; ತಮನ್ನಾ ಭಾಟಿಯಾ ಜೊತೆ ಇರೋ ಆ ತುಂಟ ಕೃಷ್ಣ ಯಾರು?

newsics.com ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮಾಡ್ರನ್‌ ರಾಧೆಯಾಗಿ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ. ಜೊತೆಗೆ ಕೃಷ್ಣನೂ ಇದ್ದಾನೆ. ಹೌದು,ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮನ್ನಾ ಭಾಟಿಯಾ ಇತ್ತೀಚೆಗೆ ಫೋಟೋಶೂಟ್‌ ಮಾಡಿಸಿದ್ದು ಆ ಸುಂದರ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಿಳಿ ನೀಲಿ ಹಾಗೂ ಪಿಂಕ್‌ ಬಣ್ಣದ ಲೆಹಂಗಾದಲ್ಲಿ ತಮನ್ನಾ ಭಾಟಿಯಾ ರಾಧೆಯಾಗಿ ಮಿಂಚಿದ್ದಾರೆ. ತನ್ನ 18 ವರ್ಷದ ಸಿನಿ ಕರಿಯರ್‌ನಲ್ಲಿ ನಾನು ಮಾಡಿಸಿದ ಫೋಟೋಶೂಟ್‌ಗಳಲ್ಲಿ ಇದು ಅತ್ಯಂತ ಬೆಸ್ಟ್‌ ಎಂದು ತಮನ್ನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.