newsics.com
ವಿಜಯನಗರ: ತುಂಗಭದ್ರಾ ಡ್ಯಾಮ್‌ನ 19ನೇ ಕ್ರಸ್ಟ್ ಗೇಟ್ ಶನಿವಾರ ಮಧ್ಯರಾತ್ರಿ ಮುರಿದ ಪರಿಣಾಮ ಭಾರೀ ಪ್ರಮಾಣದ ನೀರು ನದಿ ಸೇರುತ್ತಿದೆ.
ಡ್ಯಾಮ್‌ನ 70 ವರ್ಷದ ಇತಿಹಾಸದಲ್ಲಿ ಗೇಟ್ ಮುರಿದುಆತಂಕ ಸೃಷ್ಟಿಯಾಗಿರುವುದು ಇದು ಎರಡನೇ ಬಾರಿ. 2019ರಲ್ಲೂ ಇಂತಹದೇ ದುರ್ಘಟನೆ ಸಂಭವಿಸಿ, ಮುನಿರಾಬಾದ್ ಗ್ರಾಮಕ್ಕೂ ನೀರು ನುಗ್ಗಿತ್ತು. ಈಗಲೂ ಇಂತಹುದೇ ಸ್ಥಿತಿ ನಿರ್ಮಾಣವಾಗಿದ್ದು, ಆತಂಕ ಹೆಚ್ಚಿಸಿದೆ.
ಮುರಿದ 19ನೇ ಕ್ರಸ್ಟ್ ಗೇಟ್ ಮೂಲಕ ಭಾರೀ ಪ್ರಮಾಣದ ಅಂದರೆ ಸುಮಾರು 35 ಸಾವಿರ ಕ್ಯುಸೆಕ್‌ನಷ್ಟು ನೀರು ನದಿಗೆ ಹರಿಯುತ್ತಿರುವುದರಿಂದ ನದಿ ತೀರದ ಜನರಿಗೆ ಗಂಭೀರ ಎಚ್ಚರಿಕೆ ನೀಡಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಕಾರಟಗಿ ತಾಲೂಕಿನ ಹಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.ಜಲಾಶಯ ಭರ್ತಿಯಾಗಿರುವುದರಿಂದ ಈಗ ಗೇಟ್ ದುರಸ್ತಿ ಕಷ್ಟಕರವಾಗಿದೆಯಾದರೂ, ಬೆಂಗಳೂರಿನಿಂದ ಈಗಾಗಲೇ ತಜ್ಞರ ತಂಡ ಹೊರಟಿದ್ದು, ಭಾನುವಾರ ಬೆಳಗ್ಗೆ ಹೊತ್ತಿಗೆ ಹೊಸಪೇಟೆ ತಲುಪಲಿದೆ.
ಕ್ರಸ್ಟ್ ಗೇಟ್ 19ರ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಅಣೆಕಟ್ಟೆಯ ಎಲ್ಲ ಗೇಟ್‌ಗಳಿಂದ ಸುಮಾರು 28 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಒಳಹರಿವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾದುದರಿಂದ ಶನಿವಾರವಷ್ಟೇ ಹೊರಹರಿವಿನ ಪ್ರಮಾಣವನ್ನು ಕಡಿಮೆ ಮಾಡಲಾಗಿತ್ತು.
ಕಾಲೇಜಲ್ಲೇ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ: ಓರ್ವನ ಬಂಧನ, ಭಾರೀ ಪ್ರತಿಭಟನೆ
ಪ್ಯಾರಾಸಿಟಮಲ್ ಮಾತ್ರೆ ಹೆಚ್ಚು ತಿನ್ನದಿರಿ, ನಿಮ್ಮ ಆರೋಗ್ಯ ಹದಗೆಟ್ಟೀತು… ಹುಷಾರು
ಸೀಸನ್ 11ರ ನಿರೂಪಣೆಗೆ ಕಿಚ್ಚ ಡೌಟ್;ಕನ್ನಡ ಬಿಗ್ ಬಾಸ್ ಬಗ್ಗೆ ಚರ್ಚೆ ಜೋರು!
ತನ್ನದೇ ಹಸ್ತಮೈಥುನ ವಿಡಿಯೋ ಕಳುಹಿಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕಿ ಅರೆಸ್ಟ್!