newsics.com
ಶುಭೋದಯ
ನಿತ್ಯ ಪಂಚಾಂಗ
11 ಆಗಸ್ಟ್ 2024, ಭಾನುವಾರ
ದಿನ ವಿಶೇಷ:
ಭಾನುಸಪ್ತಮಿ, ಸೀತಲಾ ಸಪ್ತಮಿ, ಸಂತ ತುಲಸೀದಾಸರ ಜಯಂತಿ, ಕ್ರಾಂತಿಕಾರಿ ಖುದಿರಾಮ ಬೋಸ್ ಬಲಿದಾನ ದಿನ.
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ ದಕ್ಷಿಣಾಯನ
ದಿನಾಂಕ – 11/08/2024
ತಿಂಗಳು – ಆಗಸ್ಟ್
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ಸಪ್ತಮಿ ಅಹೋರಾತ್ರಿ
ಪಕ್ಷ – ಶುಕ್ಲ
ನಕ್ಷತ್ರ – ಸ್ವಾತಿ 32:32:00*
ಯೋಗ – ಶುಭ 15:47:19
ಕರಣ – ಗರಜ 18:53:01
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ತುಲಾ
ಸೂರ್ಯ ರಾಶಿ ಕರ್ಕಾಟಕ
ಋತು- ವರ್ಷ
ಸೂರ್ಯೋದಯ 06:08:04
ಸೂರ್ಯಾಸ್ತ 18:41:18
ಹಗಲಿನ ಅವಧಿ 12:33:14
ರಾತ್ರಿಯ ಅವಧಿ 11:26:53
ಚಂದ್ರೋದಯ 11:15:01
ಚಂದ್ರಾಸ್ತ 23:05:11
ರಾಹು ಕಾಲ 17:07 – 18:41 ಅಶುಭ
ಯಮಗಂಡ ಕಾಲ 12:25 – 13:59 ಅಶುಭ
ಗುಳಿಕ ಕಾಲ 15:33 – 17:07
ಅಭಿಜಿತ್ 11:59 – 12:50 ಶುಭ
ದುರ್ಮುಹೂರ್ತ 17:01 – 17:51 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಜೀವನ ಸರಳವಾದಾಗ ನಮ್ಮ ಸೋಗುಗಳು ನಿಶ್ಚಿತವಾಗಿ ದೂರವಾಗುತ್ತವೆ.
– ಲಾವೋ ತ್ಸು
***
ಇಂದಿನ ವಿಶೇಷ
ಪ್ರಮುಖ ಘಟನೆಗಳು
* ಎನಿಡ್ ಬ್ಲೈಟನ್ – ಇಂಗ್ಲಿಷ್ ಭಾಷೆಯ ಮಕ್ಕಳ ಸಾಹಿತಿ. ಎನಿಡ್ ಮೇರಿ ಬ್ಲೈಡನ್ ಅವರು ಆಗಸ್ಟ್ 11, 1897 ರಂದು ಜನಿಸಿದರು.
* ಖುದೀರಾಂ ಬೋಸ್ – ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. 1908, ಆಗಸ್ಟ್ 11 ರ ದಿನದಂದು ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ಯುವ ಕಿಡಿಯೊಂದು ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು. ಆ ಮಹಾನ್ ಚೇತನವೇ ಖುದಿರಾಮ್ ಬೋಸ್. ಗಲ್ಲಿಗೇರುವ ಮುನ್ನ ಉಚ್ಚರಿಸಿದ ‘ವಂದೇ ಮಾತರಂ’ ಘೋಷಣೆಯೇ ಖುದೀರಾಮ್ ಬೋಸ್ ಅವರ ಕೊನೆಯ ವಾಕ್ಯವಾಯಿತು.
* ಆಗಸ್ಟ್ 11, 1932 ರಂದು ಲಾಸ್ ಏಂಜೆಲಿಸ್ ಒಲಿಂಪಿಕ್ಸ್ ನಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಭಾರತವು ಅಮೆರಿಕವನ್ನು 24-1 ಅಂತರದಿಂದ ಸೋಲಿಸಿತು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಠ ಅಂತರದಲ್ಲಿ ವಿಜಯ ಸಾಧಿಸಿದ ದಾಖಲೆ ಇದು.
* ಆಗಸ್ಟ್ 11, 1947 ರಂದು ಪಾಕಿಸ್ತಾನ ರಾಷ್ಟ್ರೀಯ ಧ್ವಜವನ್ನು ಅಂಗೀಕರಿಸಿತು.
* ಆಗಸ್ಟ್ 11, 1993 ರಂದು ದೆಹಲಿಯ ಮೊದಲ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಮಂತ್ರಿಯಾಗಿದ್ದ ಬ್ರಹ್ಮಪ್ರಕಾಶ್ ಚೌಧರಿ ನಿಧನರಾದರು.
* ಆಗಸ್ಟ್ 11, 2000 ರಂದು ಗಾಂಧಿವಾದಿ ಉಷಾ ಮೆಹ್ತಾ ನಿಧನರಾದರು.
* ಶಂಕರ ಮೊಕಾಶಿ ಪುಣೇಕರ – ನಮ್ಮ ನಾಡಿನ ಮಹಾನ್ ವಿದ್ವಾಂಸರಾಗಿ, ಬರಹಗಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಈ ಮಹಾನ್ ವಿದ್ವಾಂಸರು ಆಗಸ್ಟ್ 11, 2004 ರಂದು ನಿಧನರಾದರು.
* ಆಗಸ್ಟ್ 11, 2012 ರಂದು ಭಾರತೀಯ ಭಾಷಾಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ಭದ್ರಿರಾಜು ಕೃಷ್ಣಮೂರ್ತಿ ನಿಧನರಾದರು.