newsics.com
ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರು ದುಬಾರಿ ಆಗಿದ್ದಾರೆ. ಅವರು ಒಪ್ಪಿಕೊಳ್ಳುತ್ತಿರುವ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದ್ದರೂ ಕೂಡ ಅವರ ಸಂಭಾವನೆ ಹೆಚ್ಚಾಗುತ್ತಲೇ ಇದೆ.
ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸಿನಿಮಾಗಳ ಆಯ್ಕೆಯಲ್ಲಿ ತುಂಬ ಚ್ಯೂಸಿ ಆಗಿದ್ದಾರೆ. ಅದರಲ್ಲೂ ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್ ನಲ್ಲಿ ನಟಿಸಲು ಸಮಂತಾ ಪಡೆದ ಸಂಭಾವನೆ ಎಷ್ಟು ಎಂಬುದು ಬಹಿರಂಗ ಆಗಿದೆ.
ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದ ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ಅವರು ಆ್ಯಕ್ಷನ್ ಮೆರೆದಿದ್ದರು. ಈಗ ಅದೇ ರಾಜ್-ಡಿಕೆ ನಿರ್ದೇಶನದ ‘ಸಿಟಾಡೆಲ್: ಹನಿ ಬನಿ’ ಸಿರೀಸ್ ನಲ್ಲಿ ಕೂಡ ಸಮಂತಾ ಅವರು ಆ್ಯಕ್ಷನ್ ಅಬ್ಬರ ಇರುವ ಪಾತ್ರವನ್ನು ಮಾಡಿದ್ದು, ಅದಕ್ಕಾಗಿ ಕೈತುಂಬ ಸಂಭಾವನೆ ಪಡೆದಿದ್ದಾರೆ.
ವರದಿಗಳ ಪ್ರಕಾರ, ಸಮಂತಾ ಅವರು ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಗಾಗಿ ಪಡೆದ ಸಂಭಾವನೆ ಬರೋಬ್ಬರಿ 10 ಕೋಟಿ ರೂಪಾಯಿ! ಇದು ಸಣ್ಣ ಮೊತ್ತ ಅಲ್ಲ. ಎಷ್ಟೋ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲು ಸಾಧ್ಯವಾಗಿಲ್ಲ. ಸಮಂತಾ ಅವರು ವೃತ್ತಿ ಜೀವನದಲ್ಲಿ ಒಂದೇ ಪ್ರಾಜೆಕ್ಟ್ ಗೆ 10 ಕೋಟಿ ರೂಪಾಯಿ ಪೇಮೆಂಟ್ ಪಡೆದಿರುವುದು ಇದೇ ಮೊದಲು ಎನ್ನಲಾಗಿದೆ.