ಬಾಂಗ್ಲಾ ಪಿತಾಮಹ ಶೇಖ್ ಮುಜಿಬುರ್ ರೆಹಮಾನ್ ಪ್ರತಿಮೆ ಮೇಲೆ ಮೂತ್ರ ಮಾಡಿದ ಜನ!
newsics.co. ಬಾಂಗ್ಲಾದೇಶ: ಮಾಜಿ ಅಧ್ಯಕ್ಷ ಮತ್ತು ಅದರ ಸ್ಥಾಪಕ ಪಿತಾಮಹ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯ ಮೇಲೆ ಪ್ರತಿಭಟನಾಕಾರರು ಮೂತ್ರ ವಿಸರ್ಜಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್ ಹಸೀನಾ ಪರಾರಿಯಾಗುತ್ತಿದ್ದಂತೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವ ಬದಲು ಪ್ರತಿಭಟನಾಕಾರರ ಹಿಂಸಾಚಾರ, ಸಂಭ್ರಮಾಚರಣೆ ಮಿತಿ ಮೀರಿದೆ. ಸೋಮವಾರ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿದ್ದ ಎಲ್ಲವನ್ನೂ ಲೂಟಿ ಮಾಡಿದ್ದಾರೆ.
Copy and paste this URL into your WordPress site to embed
Copy and paste this code into your site to embed