newsics.com
ಬಿಹಾರದ ವಿಷ್ಣುಪಾದ ದೇವಾಲಯವನ್ನು ಕಾಶಿ ವಿಶ್ವನಾಥ ದೇವಾಯಲದ ಕಾರಿಡಾರ್ ರೀತಿ ಮತ್ತು ಮಹಾಬೋಧಿ ದೇವಾಲಯ ಕಾರಿಡಾರ್ ಅನ್ನು ವಿಶ್ವ ದರ್ಜೆಯ ಯಾತ್ರಿಗಳು ಮತ್ತು ಪ್ರವಾಸಿ ತಾಣಗಳಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಬಜೆಟ್‌ನಲ್ಲಿ ಘೋಷಣೆ ಮಾಡಿದರು.
ಪ್ರಾಚೀನ ಭಾರತದ ಪ್ರಖ್ಯಾತ ವಿಶ್ವವಿದ್ಯಾಲಯ ನಳಂದವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ನಳಂದ ವಿಶ್ವವಿದ್ಯಾನಿಲಯದ ವೈಭವವನ್ನು ಪುನರುಜ್ಜೀವನಗೊಳಿಸಲಾಗುವುದು ಎಂದು ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದರು.
ಬಿಹಾರದ ರಾಜಗೀರ್ ಅಥವಾ ಪುರಾತನ ರಾಜಗೃಹದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ನ ಘೋಷಿಸಿದ್ದಾರೆ.