ಮನೆಯಲ್ಲಿ ಅಗ್ನಿ ಅವಘಡ: ಉಡುಪಿ ಬಾರ್ ಮಾಲೀಕ ಸಾವು, ಪತ್ನಿ, ಮಕ್ಕಳಿಬ್ಬರು ಪಾರು

newsics.com ಉಡುಪಿ: ಇಲ್ಲಿನ ಅಂಬಲಪಾಡಿಯ ಗಾಂಧಿನಗರದ ಮನೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೆಟ್ಟಿ ಬಾರ್ & ರೆಸ್ಟೋರೆಂಟ್ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಂಬಲಪಾಡಿಯ ಶೆಟ್ಟಿ ಲಂಚ್ ಹೋಮ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ ಶೆಟ್ಟಿ (50) ಆಸ್ಪ್ತರೆಯಲ್ಲಿ ಕೊನೆಯುಸಿರೆಳೆದರು. ಘಟನೆಯಲ್ಲಿ ಗಾಯಗೊಂಡಿರುವ ಅವರ ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅದೃಷ್ಟವಶಾತ್ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುತ್ರ ಹಾಗೂ ಪುತ್ರಿ ಸ್ನಾನದ ಕೋಣೆಯಲ್ಲಿ ಆಶ್ರಯ ಪಡೆದಿದ್ದರಿಂದ ಅಪಾಯದಿಂದ … Continue reading ಮನೆಯಲ್ಲಿ ಅಗ್ನಿ ಅವಘಡ: ಉಡುಪಿ ಬಾರ್ ಮಾಲೀಕ ಸಾವು, ಪತ್ನಿ, ಮಕ್ಕಳಿಬ್ಬರು ಪಾರು