ಬಿಎಸ್ಪಿ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಕೊಲೆ ಆರೋಪಿ ಎನ್‌ಕೌಂಟರ್

newsics.com ಚೆನ್ನೈ: ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ತಮಿಳುನಾಡು ಮುಖ್ಯಸ್ಥ ಕೆ. ಆರ್ಮ್‌ಸ್ಟ್ರಾಂಗ್ ಹತ್ಯೆಯ ಆರೋಪಿಗಳಲ್ಲಿ ಒಬ್ಬನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ. ಬಿಎಸ್‌ಪಿ ರಾಜ್ಯ ಮುಖ್ಯಸ್ಥರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತಿರುವೆಂಗಡಂನನ್ನು ಚೆನ್ನೈನ ಮಾಧವರಂ ಬಳಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಿರುವೆಂಗಡಂ ಕೊಲೆಗೂ ಮುನ್ನ, ಬಿಎಸ್‌ಪಿ ನಾಯಕನ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಿಕೊಂಡು ಹಲವು ದಿನಗಳ ಕಾಲ ಆರ್ಮ್‌ಸ್ಟ್ರಾಂಗ್‌ನನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಆರ್ಮ್‌ಸ್ಟ್ರಾಂಗ್ ಅವರನ್ನು ಜುಲೈ … Continue reading ಬಿಎಸ್ಪಿ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಕೊಲೆ ಆರೋಪಿ ಎನ್‌ಕೌಂಟರ್