ಅನುಷ್ಕಾಗೆ ವೀಡಿಯೋ ಕಾಲ್ ಮಾಡಿ ಭಾವುಕರಾದ ವಿರಾಟ್ ಕೊಹ್ಲಿ

ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ಗೆ ಮುತ್ತಿಕ್ಕಿದೆ. ಇದು ಭಾರತೀಯ ಕ್ರಿಕೆಟ್ ತಂಡಕ್ಕೆ ಭಾವನಾತ್ಮಕ ದಿನವಾಗಿದೆ. ಶನಿವಾರ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಟೀಂ ಇಂಡಿಯಾವನ್ನು ಸೋಲಿಸಿತು. ಗೆಲುವಿನ ನಂತರ ಕ್ರಿಕೆಟಿಗ ವಿರಾಟ್‌ ಕೊಹ್ಲಿಯವರು ತಮ್ಮ ಸಹ ಆಟಗಾರರನ್ನು ಅಭಿನಂದಿಸುತ್ತಾ ಭಾವುಕರಾದರು. ಬಳಿಕ ತಮ್ಮ ಕುಟುಂಬದ ಜೊತೆಯೂ ಮಾತನಾಡುತ್ತಾ ಆನಂದಭಾಷ್ಪ ಸುರಿಸಿದ್ದಾರೆ.