newsics.Com
ಟೊರಾಂಟೊ: ಕೆನಡಾದಲ್ಲಿ ನಡೆಯುತ್ತಿರುವ ವಿಮಾನ ನಿರ್ವಹಣಾ ಕಾರ್ಮಿಕರ ಒಕ್ಕೂಟದ ಮುಷ್ಕರದಿಂದ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನಕ್ಕೆ ತೊಡಕುಂಟಾಗಿದೆ.
ಕೆನಡಾದ ಅತಿದೊಡ್ಡ ವಿಮಾನಯಾನ ಸಂಸ್ಥೆ ವೆಸ್ಟ್‌ಜೆಟ್, ವಿಮಾನ ನಿರ್ವಹಣಾ ಕಾರ್ಮಿಕರ ಒಕ್ಕೂಟದ ಸಮಸ್ಯೆಗಳನ್ನು ಬಗೆಹರಿಸಲು ಆಸಕ್ತಿ ತೋರದ ಕಾರಣ ಸದಸ್ಯರು ಶುಕ್ರವಾರ ಸಂಜೆ ಮುಷ್ಕರ ಆರಂಭಿಸಿದ್ದರು.
ಇದರಿಂದಾಗಿ ವೆಸ್ಟ್‌ಜೆಟ್ ತನ್ನ 407 ವಿಮಾನಯಾನಗಳನ್ನು ರದ್ದುಗೊಳಿಸಿದ್ದು, ಪರಿಣಾಮ 49 ಸಾವಿರ ಪ್ರಯಾಣಿಕರು ವಿಮಾನಯಾನಕ್ಕಾಗಿ ಪರದಾಡಿದ್ದಾರೆ. ಶುಕ್ರವಾರದ ಪ್ರಯಾಣವನ್ನ ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.