ಹಠಾತ್ ಪ್ರವಾಹ: ನದಿ ದಾಟುತ್ತಿದ್ದ ಐವರು ಯೋಧರು ನೀರುಪಾಲು

newsics.com ಲಡಾಖ್: ಶನಿವಾರ ಮುಂಜಾನೆ ಲಡಾಖ್‌ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ ಬಳಿ (ಎಲ್ಎಸಿ) ಬಳಿ T-72 ಟ್ಯಾಂಕ್‌ನಲ್ಲಿ ನದಿಯೊಂದನ್ನು ದಾಟುತ್ತಿದ್ದಾಗ ಹಠಾತ್ ಪ್ರವಾಹ ಉಂಟಾಗಿದ್ದು, ಐವರು ಯೋಧರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಲೇಹ್‌ನಿಂದ 148 ಕಿಲೋಮೀಟರ್‌ ದೂರದಲ್ಲಿರುವ ಮಂದಿರ್‌ ಮೋರ್‌ ಬಳಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಟ್ಯಾಂಕ್‌ನೊಂದಿಗೆ ನದಿಯನ್ನು ದಾಟುವ ಅಭ್ಯಾಸ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸೇನಾ ಟ್ಯಾಂಕ್ ಅಪಘಾತಕ್ಕೀಡಾಗಿದ್ದು, ನದಿಯ ಆಳವಾದ ಭಾಗವನ್ನು ದಾಟುತ್ತಿದ್ದಾಗ ಸಿಲುಕಿಕೊಂಡಿತ್ತು. ಈ ವೇಳೆ … Continue reading ಹಠಾತ್ ಪ್ರವಾಹ: ನದಿ ದಾಟುತ್ತಿದ್ದ ಐವರು ಯೋಧರು ನೀರುಪಾಲು