ಕೊಡಗು: ಬಾವಿಗೆ ಬಿದ್ದ ಕಾಡಾನೆ ಸಾವು

newsics.com ವಿರಾಜಪೇಟೆ(ಕೊಡಗು): ನಿರ್ಮಾಣ ಹಂತದಲ್ಲಿರುವ ತೆರೆದ ಬಾವಿಗೆ ಬಿದ್ದು ಕಾಡಾನೆಯೊಂದು ಸಾವನ್ನಪ್ಪಿದ ದಾರುಣ ಘಟನೆ ಕೊಡಗಿನ ವಿರಾಜಪೇಟೆ ಸಮೀಪದ ಪಲಂಗಾಲ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಖಾಸಗಿ ಜಮೀನಿನಲ್ಲಿ ಬಾವಿ ತೋಡಲಾಗುತ್ತಿತ್ತು. 32 ಅಡಿಗೂ ಹೆಚ್ಚು ಆಳ ತೋಡಲಾಗಿದ್ದ ಬಾವಿಯೊಳಗೆ ಸುಮಾರು 12 ರಿಂಗ್‌ಗಳನ್ನು ಹಾಕಲಾಗಿದ್ದು, ಅದನ್ನು ಮುಚ್ಚಿರಲಿಲ್ಲ. ಆದರೆ, ಸೋಮವಾರ ಮಧ್ಯರಾತ್ರಿ ಮೇವು ಅರಸಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಆಕಸ್ಮಿಕವಾಗಿ ಈ ಬಾವಿಗೆ ಬಿದ್ದಿದೆ. ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. … Continue reading ಕೊಡಗು: ಬಾವಿಗೆ ಬಿದ್ದ ಕಾಡಾನೆ ಸಾವು