ಮುಂಬೈ: ಹಾಲಿವುಡ್‌ನಲ್ಲಿ ಬಿಜಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾರಿಗೆ ಶೂಟಿಂಗ್ ವೇಳೆ ಇರಿದ ಗಾಯವಾಗಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.
ಹಾಲಿವುಡ್‌ನ ‘ದಿ ಬ್ಲಫ್’ ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಗಂಟಲಿನ ಹೊರಭಾಗದಲ್ಲಿ ಸೀಳಾಗಿರುವುದನ್ನು ನೋಡಬಹುದು. ಈ ಮಾಹಿತಿಯನ್ನು ಖುದ್ದು ನಟಿಯೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
‘ವೃತ್ತಿ ಜೀವನದಲ್ಲಿ ಎದುರಾಗುವ ಅಪಾಯಗಳು’ ಎಂದು ನಟಿ ಬರೆದುಕೊಂಡಿದ್ದಾರೆ. ಸ್ಟಂಟ್ ಮಾಡುವಾಗ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ‘ಸಿಟಾಡೆಲ್ ‘ ವೆಬ್ ಸರಣಿಯ ಚಿತ್ರೀಕರಣದ ವೇಳೆ ಕೂಡ ನಟಿ ಇದೇ ರೀತಿ ಗಾಯ ಮಾಡಿಕೊಂಡಿದ್ದರು. ಆಗ ಎಡಹುಬ್ಬಿನ ಮೇಲೆ ಕತ್ತರಿಸಿದ ಗಾಯವಾಗಿತ್ತು. ಆಗಲೂ ನಟಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.