ನಾಟಕಕಾರ, ವಾಕ್ ಶ್ರವಣ ಚಿಕಿತ್ಸಾ ತಜ್ಞ ಡಾ.ನ. ರತ್ನ ಇನ್ನಿಲ್ಲ

newsics.com ಮೈಸೂರು: ಹಿರಿಯ ರಂಗಕರ್ಮಿ, ಅತೀವ ಸಾಂಸ್ಕೃತಿಕ, ಸಾಮಾಜಿಕ ಕಳಕಳಿ ಹೊಂದಿದ್ದ ಡಾ.ನ.ರತ್ನ (ನಟೇಶ ರತ್ನ)ಅವರು ಬುಧವಾರ ಬೆಳಗ್ಗೆ ಮೈಸೂರಿನಲ್ಲಿ ನಿಧನರಾದರು. ವಯೋಸಹಜ ಅನಾರೋಗದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಡಾ.ನ. ರತ್ನ ಎಂದೇ ಪರಿಚಿತರಾಗಿದ್ದ ನಾಟಕಕಾರ ನಟೇಶ ರತ್ನ ಅವರು ಹುಟ್ಟಿದ್ದು ತಮಿಳುನಾಡಿನ ಚಿದಂಬರಂನಲ್ಲಿಯಾದರೂ ವಿದ್ಯಾಭ್ಯಾಸ ನಡೆಸಿದ್ದು ಮೈಸೂರಿನಲ್ಲಿ. ವೃತ್ತಿಯಲ್ಲಿ ವಾಕ್‌ಶ್ರವಣ ಚಿಕಿತ್ಸಾ ತಜ್ಞರಾಗಿದ್ದ ರತ್ನ ನಟರು ನಾಟಕಕಾರರೂ ಆಗಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ, ಬಿ.ಎಡ್‌ ಪದವಿ ಪಡೆದ ಇವರು ಅಮೆರಿಕದಲ್ಲಿ ಉನ್ನತ … Continue reading ನಾಟಕಕಾರ, ವಾಕ್ ಶ್ರವಣ ಚಿಕಿತ್ಸಾ ತಜ್ಞ ಡಾ.ನ. ರತ್ನ ಇನ್ನಿಲ್ಲ